Tally : A Complete Guide in Kannada
ಪೀಠಿಕೆ: ಇಂದಿನ ವೇಗದ ವ್ಯವಹಾರ ಜಗತ್ತಿನಲ್ಲಿ, ಪ್ರತಿಯೊಬ್ಬ ಉದ್ಯಮಿಯ ಗುರಿ ತನ್ನ ವ್ಯವಹಾರವನ್ನು ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸುವುದು. ಆದರೆ ಲೆಕ್ಕಪತ್ರಗಳ ನಿರ್ವಹಣೆ (Accounting) ವಿಷಯಕ್ಕೆ ಬಂದಾಗ ಅನೇಕರು ಗೊಂದಲಕ್ಕೊಳಗಾಗುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೆ ಸರಳ ಮತ್ತು ಸಮರ್ಥ ಪರಿಹಾರವೇ ಟ್ಯಾಲಿ (Tally) . ಟ್ಯಾಲಿ ( Tally ) ಸಾಫ್ಟ್ ವೇರ್ : ಆಧುನಿಕ ವ್ಯವಹಾರಗಳ ಯಶಸ್ಸಿನ ಸೂತ್ರ ! ಹಾಗಾದರೆ ಟ್ಯಾಲಿ ( Tally ) ಎಂದರೇನು ? ಟ್ಯಾಲಿ ( Tally ) ಎಂಬುದು ಬಳಕೆದಾರ ಸ್ನೇಹಿ ಅಕೌಂಟಿಂಗ್ ಸಾಫ್ಟ್ ವೇರ್ ಆಗಿದ್ದು , ಇದು ವಿವಿಧ ಕಂಪನಿಯ ಅಕೌಂಟಿಂಗ್ ( ವ್ಯವಹಾರಗಳ ) ಮಾಹಿತಿಗಳನ್ನು ಎಂಟ್ರಿ ಮಾಡಲು ಉಪಯೋಗಿಸಲಾಗುತ್ತದೆ . ಟ್ಯಾಲಿ(Tally ) ಅಪ್ಲಿಕೇಶನನ್ನು ಪೆಟ್ರೋನಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕರಾದ ಎಸ್ . ಎಸ್ . ಗೋಯೆಂಕಾ ಅವರು 1986 ರಲ್ಲಿ ಅವರ ಕಂಪನಿಯ ವ್ಯವಹಾರಗಳನ್ನು ಎಂಟ್ರಿ ( Entry ) ಮಾಡಲು ಅಕೌಂಟಿಂಗ್ (Accounting ) ಸೂತ್ರದ (Principle ) ಆಧಾರದ ಮೇಲೆ ಒಂದು ಅಪ್ಲಿಕೇಶನ್( Application ) ಪ್ರಾರಂಭಿಸಿದರು, ಮತ್ತು ಅದು ಕಂಪನಿಯ ಲಾಭ ಮತ್ತು ನಷ್ಟ ವರಧಿ ಅತ್ಯಂತ ಅದ್ಭುತವಾಗಿ ನೀಡಲು ಪ್ರಾರಂಭಿಸಿತು. ಆದ್ದರಿಂದ ಅದಕ್ಕೆ...