Memory Device or Memory units (ಮೆಮೊರಿ ಸಾಧನ ಅಥವಾ ಮೆಮೊರಿ ಘಟಕಗಳು)
ಕಂಪ್ಯೂಟರ್ ಮೆಮೊರಿ ಮತ್ತು ಶೇಖರಣಾ ಸಾಧನಗಳು: ಒಂದು ಸಂಪೂರ್ಣ ಮಾರ್ಗದರ್ಶಿಕೆ
ಇವತ್ತಿನ ದಿನಗಳಲ್ಲಿ ಕಂಪ್ಯೂಟರ್ಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ನಮ್ಮ ವಯಕ್ತಿಕ ಡಾಕ್ಯುಮೆಂಟ್ಗಳು, ಹಾಗೂ ನಾವು ಕೆಲಸ ಮಾಡುವ ಡಾಕ್ಯುಮೆಂಟ್ಗಳಿಂದ ಹಿಡಿದು, ವೀಕ್ಷಿಸುವ ವೀಡಿಯೊಗಳು(TV) ಮತ್ತು ಆಡುವ ಗೇಮ್ಗಳವರೆಗೆ ಎಲ್ಲವೂ ಡಿಜಿಟಲ್ ರೂಪದಲ್ಲಿ ಸಂಗ್ರಹವಾಗುತ್ತವೆ. ಆದರೆ, ಈ ಎಲ್ಲಾ ಮಾಹಿತಿಗಳು ಕಂಪ್ಯೂಟರ್ನಲ್ಲಿ ಹೇಗೆ ಉಳಿಯುತ್ತವೆ? ಇದಕ್ಕೆ ಉತ್ತರವೇ 'ಮೆಮೊರಿ'(Memory) ಅಥವಾ 'ಶೇಖರಣಾ ಸಾಧನಗಳು'. ಇವು ಕಂಪ್ಯೂಟರ್‌ನ ಮೆದುಳಿಗೆ ಮಾಹಿತಿಯನ್ನು ಒದಗಿಸುವ ಮತ್ತು ಸಂಗ್ರಹಿಸಿಡುವ ಹೃದಯ ಭಾಗಗಳಾಗಿ
ಕರ್ಯನಿರ್ವಹಿಸುತ್ತವೆ.
ಕಂಪ್ಯೂಟರ್ ಮೆಮೊರಿಯನ್ನು ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ: ಪ್ರಾಥಮಿಕ ಮೆಮೊರಿ (Primary Memory) ಮತ್ತು ದ್ವಿತೀಯ ಮೆಮೊರಿ (Secondary Memory). ಪ್ರಾಥಮಿಕ ಮೆಮೊರಿಯು ಸಿಪಿಯುಗೆ (CPU) ಸನಿಹದಲ್ಲಿ ಇರುತ್ತವೆ ಮತ್ತು ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತವೆ, ಆದರೆ ದ್ವಿತೀಯ ಮೆಮೊರಿಯು ದೊಡ್ಡ ಪ್ರಮಾಣದ ಡೇಟಾವನ್ನು ದೀರ್ಘಕಾಲ ಸಂಗ್ರಹಿಸಲು ಬಳಸುವ ಶಾಶ್ವತ ಶೇಖರಣೆಯಾಗಿದೆ. ದ್ವಿತೀಯ ಮೆಮೊರಿಯನ್ನು ನಾವು
ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್ ಗೆ ವರ್ಗಾಯಿಸಲು ಬರುತ್ತದೆ. ಇದಕ್ಕೆ ಇನ್ನೊಂದು
ಹೆಸರು ಸಂಚಾರಿ ಮೆಮೊರಿ ಅಂತಾನೂ ಹೇಳಬಹುದು.
ಕಂಪ್ಯೂಟರ್ ಮೆಮೊರಿ ಅಳತೆಯ ಘಟಕಗಳು (Memory Units)
ಕಂಪ್ಯೂಟರ್ ಡೇಟಾವನ್ನು ಬಿಟ್ , ಬೈಟ್ , ಕೆಬಿ, ಎಮ್‌ಬಿ, ಜಿಬಿ, ಟಿಬಿ ಗಳಲ್ಲಿ ಅಳೆಯಲಾಗುತ್ತದೆ :
8 Bits = 1 Byte
1024 Bytes = 1 KB
1024 KB = 1 MB
1024 MB = 1 GB
1024 GB = 1 TB
1024 TB = 1 PB
1024 PB = 1 Ex-PB
ಕಂಪ್ಯೂಟರ್‌ನಲ್ಲಿ ಸಂಗ್ರಹವಾಗುವ ಮೆಮೊರಿಯನ್ನು ಅಳೆಯಲಾಗುವದು.
ನಾವು ಈ ಪ್ರತಿಯೊಂದು ವಿಧಗಳನ್ನು ರೇಖಾಚಿತ್ರದಲ್ಲಿ ತೋರಿಸಿರುವ ವಿವಿಧ ಸಾಧನಗಳ ಬಗ್ಗೆ ವಿವರವಾಗಿ ಚರ್ಚಿಸೋಣ.
1. ಪ್ರಾಥಮಿಕ ಮೆಮೊರಿ (Primary Memory)
ಇದು ಕಂಪ್ಯೂಟರ್‌ನ ಮುಖ್ಯ ಮೆಮೊರಿಯಾಗಿದ್ದು, ಸಿಪಿಯು (CPU) ನೇರವಾಗಿ ಸಂಪರ್ಕಿಸುವ ಅತ್ಯಂತ ವೇಗದ ಶೇಖರಣಾ ಸ್ಥಳವಾಗಿದೆ.
1. RAM (Random Access Memory):
ಇದು ತಾತ್ಕಾಲಿಕ (volatile) ಮೆಮೊರಿಯಾಗಿದೆ. ಅಂದರೆ, ಕಂಪ್ಯೂಟರ್ ಆಫ್ ಮಾಡಿದ ತಕ್ಷಣ ಇದರಲ್ಲಿರುವ ಎಲ್ಲಾ ಡೇಟಾ ಅಳಿಸಿಹೋಗುತ್ತದೆ.
ಕಂಪ್ಯೂಟರ್ ಚಾಲನೆಯಲ್ಲಿರುವಾಗ ನೀವು ಮಾಡುವ ಕೆಲಸಗಳನ್ನು ಹಾಗೂ ಮಾಡುತ್ತಿರುವ ಪ್ರೋಗ್ರಾಂಗಳು ಮತ್ತು ಡೇಟಾವನ್ನು ಇಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ.
RAM ಇಲ್ಲದಿದ್ದರೆ ಏನಾಗುತ್ತದೆ?
ಕಂಪ್ಯೂಟರ್ನಲ್ಲಿ RAM ಅಳವಡಿಸದಿದ್ದರೆ, ಸಿಸ್ಟಮ್ ಪವರ್ ಆನ್ ಆಗಬಹುದು (ಫ್ಯಾನ್ಗಳು ತಿರುಗಬಹುದು, ಲೈಟ್ಗಳು ಉರಿಯಬಹುದು), ಆದರೆ ಅದು ಸಂಪೂರ್ಣವಾಗಿ ಬೂಟ್(ಆನ್) ಆಗುವುದಿಲ್ಲ.
ಪವರ್-ಆನ್ ಸೆಲ್ಫ್ ಟೆಸ್ಟ್ (POST) ವಿಫಲವಾಗುತ್ತದೆ: ಕಂಪ್ಯೂಟರ್ ಶುರುವಾಗುವಾಗ, ಅದು ತನ್ನ ಎಲ್ಲಾ ಮುಖ್ಯ ಹಾರ್ಡ್ವೇರ್ ಘಟಕಗಳನ್ನು (CPU, RAM, ಇತ್ಯಾದಿ) ಪರೀಕ್ಷಿಸುತ್ತದೆ. RAM ಇಲ್ಲದಿದ್ದರೆ, ಈ ಪರೀಕ್ಷೆ (POST) ವಿಫಲಗೊಳ್ಳುತ್ತದೆ.
ಎರರ್ ಕೋಡ್ಗಳು: ಮದರ್ಬೋರ್ಡ್ನಲ್ಲಿ ಸ್ಪೀಕರ್ ಇದ್ದರೆ, ಅದು ವಿಶಿಷ್ಟವಾದ ಬೀಪ್ ಸೌಂಡ್ಗಳನ್ನು ಹೊರಡಿಸುತ್ತದೆ ಅಥವಾ ಹೊಸ ಮದರ್ಬೋರ್ಡ್ಗಳಲ್ಲಿ LED ಲೈಟ್ಗಳ ಮೂಲಕ RAM ಸಮಸ್ಯೆ ಇದೆ ಎಂದು ಸೂಚಿಸುತ್ತದೆ.
ಡಿಸ್ಪ್ಲೇ ಬರುವುದಿಲ್ಲ: ಪರದೆಯ ಮೇಲೆ ಏನೂ ಕಾಣಿಸಿಕೊಳ್ಳುವುದಿಲ್ಲ, ಏಕೆಂದರೆ BIOS/UEFI ಫರ್ಮ್ವೇರ್ ರನ್ ಆಗಲು ತಾತ್ಕಾಲಿಕವಾಗಿ RAM ಗೆ ಲೋಡ್ ಆಗಬೇಕಾಗುತ್ತದೆ.
RAM ಇಲ್ಲದೆ, ಕಂಪ್ಯೂಟರ್ ತನ್ನ ಪ್ರಾಥಮಿಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ತಾತ್ಕಾಲಿಕ ಮೆಮೊರಿಯನ್ನು ಹೊಂದಿರುವುದಿಲ್ಲ ಮತ್ತು ಹಾಗಾಗಿ ಸಂಪೂರ್ಣವಾಗಿ ಆನ್ ಆಗುವುದಿಲ್ಲ.
i. SRAM (Static RAM): ಇದು DRAM ಗಿಂತ ವೇಗವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಸಿಪಿಯು ಕ್ಯಾಶ್ ಮೆಮೊರಿಯಾಗಿ ಬಳಸಲ್ಪಡುತ್ತದೆ.
ii. DRAM (Dynamic RAM): ಇದು ಮುಖ್ಯ ಸಿಸ್ಟಮ್ RAM ಆಗಿ ಬಳಸಲ್ಪಡುತ್ತದೆ. ಇದು SRAM ಗಿಂತ ನಿಧಾನವಾಗಿದ್ದರೂ, ಹೆಚ್ಚು ಸಾಂದ್ರವಾಗಿರುತ್ತದೆ ಮತ್ತು ಕಡಿಮೆ ವೆಚ್ಚದಾಯಕವಾಗಿದೆ.
2. ROM (Read Only Memory):
ಇದು ಕಾಯಂ (non-volatile) ಮೆಮೊರಿಯಾಗಿದೆ. ಕಂಪ್ಯೂಟರ್ ಆಫ್ ಆದರೂ ಇದರಲ್ಲಿರುವ ಮಾಹಿತಿ ಅಳಿಸಿಹೋಗುವುದಿಲ್ಲ.
ಕಂಪ್ಯೂಟರ್ ಬೂಟ್ ಆಗಲು (ಪ್ರಾರಂಭಿಸಲು) ಅಗತ್ಯವಿರುವ ಮೂಲ ಸೂಚನೆಗಳು ಮತ್ತು ಫರ್ಮ್ವೇರ್ ಅನ್ನು ಇದರಲ್ಲಿ ಸಂಗ್ರಹಿಸಲಾಗುತ್ತದೆ.
ROM (Read-Only Memory) ಕಂಪ್ಯೂಟರ್‌ನ ಅತ್ಯಂತ ಮುಖ್ಯವಾದ ಭಾಗಗಳಲ್ಲಿ ಒಂದಾಗಿದೆ. ಇದು ಈ ಕೆಳಗಿನ ಕೆಲಸಗಳಿಗಾಗಿ ಉಪಯೋಗವಾಗುತ್ತದೆ:
1. ಕಂಪ್ಯೂಟರ್ ಪ್ರಾರಂಭಿಸಲು (Booting): ಕಂಪ್ಯೂಟರ್ ಆನ್ ಮಾಡಿದಾಗ, ಹಾರ್ಡ್ವೇರ್ ಘಟಕಗಳನ್ನು ಪರೀಕ್ಷಿಸಲು ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ಲೋಡ್ ಮಾಡಲು ಬೇಕಾದ ಸೂಚನೆಗಳನ್ನು ROM ಸಂಗ್ರಹಿಸಿರುತ್ತದೆ. ಇದನ್ನು BIOS (Basic Input / Output System) ಎನ್ನಲಾಗುತ್ತದೆ.
2. ಶಾಶ್ವತ ಮಾಹಿತಿ ಸಂಗ್ರಹಣೆ: ವಿದ್ಯುತ್ ಹೋದರೂ ಅಥವಾ ಕಂಪ್ಯೂಟರ್ ಆಫ್ ಆದರೂ ಇದರಲ್ಲಿರುವ ಮಾಹಿತಿ ಅಳಿಸಿಹೋಗುವುದಿಲ್ಲ (Non-volatile). ಹಾಗಾಗಿ ಇದು ಕಂಪ್ಯೂಟರ್‌ನ ಮೂಲ ಕಾರ್ಯವಿಧಾನಕ್ಕೆ ಬೇಕಾದ ಮುಖ್ಯ ಪ್ರೋಗ್ರಾಂಗಳನ್ನು ಶಾಶ್ವತವಾಗಿ ಇಟ್ಟುಕೊಂಡಿರುತ್ತದೆ.
3. ಫರ್ಮ್ವೇರ್ (Firmware): ತಯಾರಕರು ಕಂಪ್ಯೂಟರ್ಗೆ ನೀಡುವ ಅಗತ್ಯ ಸಾಫ್ಟ್ವೇರ್ ಸೂಚನೆಗಳನ್ನು ROM ಚಿಪ್ನಲ್ಲಿ ಹಾಕಿರುತ್ತಾರೆ. ಇವುಗಳನ್ನು ಬಳಕೆದಾರರು ಸುಲಭವಾಗಿ ಅಳಿಸಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ.
4. ಇತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ: ಕಂಪ್ಯೂಟರ್ ಮಾತ್ರವಲ್ಲದೆ, ವಾಷಿಂಗ್ ಮೆಷಿನ್, ಮೈಕ್ರೋವೇವ್ ಓವನ್ ಮತ್ತು ಡಿಜಿಟಲ್ ವಾಚ್ಗಳಂತಹ ಸಾಧನಗಳು ಹೇಗೆ ಕೆಲಸ ಮಾಡಬೇಕು ಎಂಬ ಸೂಚನೆಗಳನ್ನು ಸಹ ROM ನಲ್ಲೇ ಸೇರಿಸಲಾಗಿರುತ್ತದೆ.
ROM (Read Only Memory) ವಿಧಗಳು:
i. PROM (Programmable ROM): ಇದನ್ನು ಒಮ್ಮೆ ಮಾತ್ರ ಪ್ರೋಗ್ರಾಂ ಮಾಡಬಹುದು.
ii. EPROM (Erasable PROM): ಇದರಲ್ಲಿರುವ ಡೇಟಾವನ್ನು ನೇರಳಾತೀತ ಬೆಳಕನ್ನು (UV light) ಬಳಸಿ ಅಳಿಸಿ, ಮತ್ತೆ ಪ್ರೋಗ್ರಾಂ ಮಾಡಬಹುದು.
iii. EEPROM (Electrically Erasable PROM): ಇದರಲ್ಲಿರುವ ಡೇಟಾವನ್ನು ವಿದ್ಯುತ್ ಸಿಗ್ನಲ್ಗಳನ್ನು ಬಳಸಿ ಅಳಿಸಬಹುದು ಮತ್ತು ಮತ್ತೆ ಬರೆಯಬಹುದು.
2. ದ್ವಿತೀಯ ಶೇಖರಣಾ ಸಾಧನಗಳು (Secondary Storage Devices)
ಇವು ದೀರ್ಘಕಾಲೀನ ಶೇಖರಣೆಗಾಗಿ ಬಳಸುವ ಕಾಯಂ (non-volatile)
ಸಾಧನಗಳಾಗಿವೆ. ಇವು ಪ್ರಾಥಮಿಕ ಮೆಮೊರಿಗಿಂತ ಹೆಚ್ಚಿನ ಪ್ರಮಾಣದ ಡೇಟಾವನ್ನು ಕಾಯಂ ( Permanents ) ಆಗಿ ಸಂಗ್ರಹಿಸಿಡಬಹುದು ಮತ್ತು ನಾವು ಒಂದು
ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್ ಗೆ ವರ್ಗಾಯಿಸಲು ಬರುತ್ತದೆ.
1. HDD (Hard Disk Drive):
ಇದು ಮ್ಯಾಗ್ನೆಟಿಕ್ ಶೇಖರಣಾ ತಂತ್ರಜ್ಞಾನವನ್ನು ಬಳಸುತ್ತದೆ. ತಿರುಗುವ ಪ್ಲ್ಯಾಟರ್ಗಳ (platters) ಮೇಲೆ ಡೇಟಾವನ್ನು ಕಾಂತೀಯವಾಗಿ ಬರೆಯಲಾಗುತ್ತದೆ ಮತ್ತು ಓದಲಾಗುತ್ತದೆ.ಇದು ದೊಡ್ಡ ಪ್ರಮಾಣದ ಡೇಟಾ ಸಂಗ್ರಹಣೆಗೆ (Terabytes) ಉಪಯೋಗಿಸಲಾಗುತ್ತದೆ.
HDD Drive ಸ್ವಲ್ಪ ನಿಧಾನವಾಗಿರುತ್ತದೆ (ಡೇಟಾ ವರ್ಗಾವಣೆ ದರ ಸುಮಾರು 80–160 MB/s) .
2. SSD (Solid State Drive):
ಇದು ಫ್ಲ್ಯಾಶ್ ಮೆಮೊರಿ ತಂತ್ರಜ್ಞಾನವನ್ನು ಬಳಸುತ್ತದೆ (ಪೆನ್ ಡ್ರೈವ್ಗಳಂತೆಯೇ). ಇದರಲ್ಲಿ ಯಾವುದೇ ಚಲಿಸುವ ಭಾಗಗಳಿಲ್ಲ.
ಇದು HDD Drive ಗಳಿಗಿಂತ ಅತ್ಯಂತ ವೇಗವಾಗಿ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಕಡಿಮೆ ಶಕ್ತಿಯನ್ನು ಬಳಸುತ್ತದೆ. ಇದು
4. Floppy Disk:
ಇದು ತುಂಬಾ ಹಳೆಯ ಕಾಲದ ತಂತ್ರಜ್ಞಾನದ ಮ್ಯಾಗ್ನೆಟಿಕ್ ಶೇಖರಣಾ ಸಾಧನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ಬಳಕೆಯಲ್ಲಿಲ್ಲ.
5. Magnetic Tape:
ಈ ಮೆಮೊರಿಯನ್ಇನು ನೀವು ನೋಡಿರುತ್ತೀರಿ ನಿಮ್ಮ ಮನೆಯಲ್ಲಿ ಹಾಡುಗಳನ್ನು ಕೇಳಲು ಬಳಸುವದನ್ನು, ಇದು ಡೆಟಾ ಸಂಗ್ರಹಣೆಗೆ ಉಪಯೋಗಿಸುವ ಒಂದು ಮ್ಯಾಗ್ನೆಟಿಕ್ ಶೇಖರಣೆಯ ರೂಪವಾಗಿದ್ದು, ಡೇಟಾದ ದೀರ್ಘಕಾಲೀನ ಬ್ಯಾಕಪ್ಗಾಗಿ ಬಳಸಲಾಗುತಿತ್ತು.ಉಪಸಂಹಾರ:
ಒಟ್ಯಾಟಾರೆಯಾಗಿ ಹೇಳುವುದಾದರೆ ಯಾವುದೇ ಕಂಪ್ಯೂಟರ್‌ನ ದಕ್ಷತೆಯು ಅದರ ಮೆಮೊರಿ ಮತ್ತು ಸ್ಟೋರೇಜ್ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಹೊಸ ಕಂಪ್ಯೂಟರ್ ಕೊಳ್ಳುವಾಗ ಕನಿಷ್ಠ 8GB RAM ಮತ್ತು SSD ಇರುವ ಸಾಧನವನ್ನು ಆರಿಸಿಕೊಂಡರೆ ನಿಮ್ಮ ಕೆಲಸಗಳು ಸುಗಮವಾಗಿ ನಡೆಯುತ್ತವೆ.
ಸ್ನೇಹಿತರೆ ಈ ಬ್ಲಾಗ್ ಓದಿ ನಿಮಗೆ ಸಂತೋಷವಾಗಿದೆ ಎಂದುಕೊಂಡಿದ್ದೇನೆ. ಏನಾದರೂ ಪ್ರಶ್ನೆಗಳಿದ್ದರೆ ಸಂದೇಶವನ್ನು ಕಳುಹಿಸಿ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ YouTube Video ವಿಕ್ಷಿಸಿ
ನನ್ನ ಬ್ಲಾಗ್ ನ ಪೊಸ್ಟನಲ್ಲಿರು ಸಂಪೂರ್ಣ ಮಾಹಿತಿಯು PDFನಲ್ಲಿ ಇದೆ.
PDF ನೋಟ್ಸ್ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ / Download PDF Notes Here







Comments
Post a Comment